ಸೃಷ್ಟಿಯ ಚಲನ ಜೀವನ ಮರಣ
ಸೃಷ್ಟಿಯ ಚಲನ ಜೀವನ ಮರಣ ಜೀವ ಜೀವದ ಈ ಮಣ್ಣ ಮೂರು ದಿನದ ಸಂತೆಯ ಮುಗಿಸಿ ಸೇರುವರೆಲ್ಲಾ ಈ ಮಣ್ಣ ಕಾಡಲಿ ಹುಟ್ಟಿದ ಕೋಗಿಲೆಯ ಧ್ವನಿಯೇ ಮಿಗಿಲೆಂದ್ಹೇಳುವರು ಕೆಸರಲಿ ಹುಟ್ಟಿದ ತಾವರೆಯ ದೇವರ ಮುಡಿಯಲಿ ಉಡಿಸುವರು||೨|| ಎಲ್ಲಿದೆಯಣ್ಣಾ ಮಡಿ ಮೈಲಿಗೆಯು ಸೃಷ್ಟಿಯ ಮೂಲ ಈ ಮಣ್ಣ||೨|| ಈ ಮಣ್ಣಿನ ಮಹಿಮೆಯ ಅರಿಯದ ಮಂದಿ ಮಣ್ಣಾಗಿ ಹೋಗ್ಯಾರು ಕಾಣಣ್ಣ||೨|| ಜಾತಿ ಪಂಥ ಮಡಿ ಮೈಲಿಗೆಯ ಭೇದ ಭಾವ ಈ ಮಣ್ಣಿಗಿಲ್ಲ ಬಡವ ಬಲ್ಲಿದ ದಲಿತವೆಂಬ ಭೇದ ಭಾವ ಈ ಮಣ್ಣಿಗಿಲ್ಲ ||೨|| ಯಾರೆ ಬಿತ್ತಿದರು ಫಲವನು ಕೊಡುವ ಪಾವನವಾದ ಈ ಮಣ್ಣು ||೨|| ಈ ಮಣ್ಣಿನ ಋಣದಲಿ ಬದುಕುವ ನಾವು ಕೊಡಲಿಲ್ಲ ಅದಕ್ಕೆ ಎನನ್ನು||೨||